   ಮೂಲದೊಡನೆ ಪರಿಶೀಲಿಸಿ 

ಏಕಮುಖ ವಿದ್ಯುದ್ಯಂತ್ರ ಪರೀಕ್ಷೆಗಳು: ವಿದ್ಯುದ್ಯಂತ್ರಗಳ ಪರೀಕ್ಷೆ, ಅವುಗಳ ತಯಾರಿಕೆಯ ಕೊನೆಯ ಹಂತ. ಉದ್ದೇಶಿತ ಕಾರ್ಯನಿರ್ವಹಣ ಸಾಮಥರ್ಯ್‌ ಅವುಗಳಿಗಿದೆಯೇ ಎಂಬುದನ್ನು ತಿಳಿಯಲು ಈ ಪರೀಕ್ಷೆಗಳು ಅವಶ್ಯ. ಎಂಜಿನಿಯರ್ ಬರೆದುಕೊಟ್ಟ ಆಲೇಖ್ಯ ಮತ್ತು ರಚನಾವಿಧಾನಕ್ಕನುಗುಣವಾಗಿ ತಯಾರಿಸಿದ ಈ ಯಂತ್ರಗಳನ್ನು ಕ್ಷೇತ್ರಪರೀಕ್ಷೆಗೆ (ಫೀಲ್ಡ್‌ ಟೆಸ್ಟ್‌) ಕಳಿಸುವ ಮೊದಲು ಯಂತ್ರದ ಮುಖ್ಯ ಭಾಗಗಳು, ಧ್ರುವಗಳು (ಪೋಲ್ಸ್‌), ಚಂಡ (ಷಾಫ್ಟ್‌), ಧಾರಕಗಳು (ಬೇರಿಂಗ್ಸ್‌) ಮತ್ತು ಯಂತ್ರದಲ್ಲಿ ಬಳಸಿರುವ ಅವಾಹಕಗಳ ಪ್ರತಿರೋಧ (ಇನ್ಸುಲೇಷನ್ ರೆಸಿಸ್ಟೆನ್ಸ್‌) ಇವನ್ನು ನೋಡಿರಬೇಕು. ಅನಂತರ ಅವು ಪರೀಕ್ಷೆಗೆ ಅರ್ಥವಾಗುತ್ತವೆ. ಒಂದು ಯಂತ್ರದ ದಕ್ಷತೆಯನ್ನು ಅಳೆಯುವುದರ ಮೂಲಕ ಅದರ ಕಾರ್ಯನಿರ್ವಹಣೆಯ ಬಗ್ಗೆ ಒಂದು ನಿರ್ಧಾರಕ್ಕೆ ಬರಬಹುದು. ಯಂತ್ರದಿಂದ ದೊರೆಯುವ ಸಾಮಥರ್ಯ್‌ (ಔಟ್ಪುಟ್ ಪವರ್) ಮತ್ತು ಯಂತ್ರಕ್ಕಾಗಿ ವ್ಯಯಿಸಿದ ಸಾಮಥರ್ಯ್‌ ಇವುಗಳ ಪ್ರಮಾಣ ಅದರ ದಕ್ಷತೆ. ಇದನ್ನು ಕಂಡುಹಿಡಿಯುವಾಗ ಮುಖ್ಯವಾಗಿ ಯಂತ್ರದಲ್ಲಿ ಉಪಯೋಗಿಸಲಾಗಿರುವ ಕಬ್ಬಿಣ, ತಾಮ್ರದಿಂದಾದ ನಷ್ಟಗಳು ಹಾಗೂ ಘರ್ಷಣದಿಂದ ಮತ್ತು ಕಾಂತತ್ವದಿಂದಾದ ನಷ್ಟಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಏಕಮುಖ ವಿದ್ಯುದ್ಯಂತ್ರಗಳನ್ನು ಪರೀಕ್ಷೆ ಮಾಡಲು ಐದು ವಿಧಾನಗಳನ್ನು ಅನುಸರಿಸುತ್ತಾರೆ. 

1. ಗತಿಪ್ರತಿಬಂಧಕ ಪರೀಕ್ಷೆ (ಬ್ರೇಕ್ ಟೆಸ್ಟ್‌): ಸಣ್ಣ ಏಕಮುಖ ವಿದ್ಯುತ್ ಮೋಟಾರನ್ನು ಪರೀಕ್ಷಿಸಲು ಇದೊಂದು ನೇರ ವಿಧಾನ. ನೀರಿನಿಂದ ತಂಪಿಸುವ ಒಂದು ರಾಟೆ. ಇದನ್ನು ಒಂದು ಸಣ್ಣ ಮೋಟಾರಿನ ದಂಡದ ಮೇಲೆ ನಿಲ್ಲಿಸಿದೆ. ರಾಟೆಯಲ್ಲಿ ಗತಿಪ್ರತಿಬಂಧವನ್ನು ಉಂಟುಮಾಡಿ ಯಂತ್ರದ ಮೇಲೆ ಉಂಟಾದ ಹೊರೆಯನ್ನು (ಲೋಡ್) ಯಂತ್ರ ತನ್ನ ಸಾಮಥರ್ಯ್‌ವಿರುವಷ್ಟು ವಿದ್ಯುತ್ಪ್ರವಾಹವನ್ನು ಪಡೆಯುವವರೆಗೂ ಅಳವಡಿಸುತ್ತಾರೆ. ರಾಟೆಯ ಮೇಲೆ ಉಪಯೋಗಿಸಲಾದ ಪಟ್ಟಿಯ (ಬೆಲ್ಟ್‌) ಬಿಗಿ ಹಾಗೂ ಜಾರುವ ಭಾಗಗಳಲ್ಲುಂಟಾದ ಎಳೆತಗಳಲ್ಲಿನ (ಟೆನ್ಷನ್ಸ್‌) ವ್ಯತ್ಯಾಸದ ಸಹಾಯದಿಂದ ಮೋಟಾರಿನಿಂದೊದಗುವ ಸಾಮಥರ್ಯ್‌ವನ್ನು ನಿರ್ಧರಿಸುತ್ತಾರೆ. 
ಇಲ್ಲಿ W1 = ಇಳಿಬಿಡಲಾದ ತೂಕ (ಕಿಲೋಗ್ರಾಂಗಳಲ್ಲಿ), W2 = ಎಗರು ತ್ರಾಸಿನ ಓದಿಕೆ (ಕಿಲೋಗ್ರಾಂಗಳಲ್ಲಿ). ಓ = ಮೋಟಾರಿನ ವೇಗ (ಖPಒ ಗಳಲ್ಲಿ), ಖ = ರಾಟೆಯ ತ್ರಿಜ್ಯ (ಮೀಟರುಗಳಲ್ಲಿ). ಗಣನೆಯ ಪ್ರಕಾರ ಲಭ್ಯ ಸಾಮಥರ್ಯ್‌ (ಔಟ್ ಪುಟ್)  ವಾಟುಗಳು. ಯಂತ್ರಕ್ಕೆ ಒದಗಿಸಿದ ವೋಲ್ಟೇಜ್ ಗಿ ಇದ್ದು ಯಂತ್ರಪಡೆದ ವಿದ್ಯುತ್ I ಇದ್ದಾಗ ನಾವು ವ್ಯಯಿಸಿದ ಸಾಮಥರ್ಯ್‌ (ಇನ್ಪುಟ್) = ಗಿI ವಾಟುಗಳು.
ಆಗ ದಕ್ಷತೆ (ಶೇ.) 

ದೊಡ್ಡ ಮೋಟಾರುಗಳನ್ನು ಪರೀಕ್ಷಿಸಲು ಈ ಪರೀಕ್ಷೆ ಸಹಾಯವಾಗುವುದಿಲ್ಲ. ಏಕೆಂದರೆ ನಾವು ವ್ಯಯಿಸಿದ ಸಾಮಥರ್ಯ್‌ ನಷ್ಟವಾಗುವುದಲ್ಲದೇ ಪರೀಕ್ಷೆಗೆ ಬೇಕಾದ ಅನುಕೂಲಗಳಿರುವುದಿಲ್ಲ.

2. ಸ್ವಿನ್ಬರ್ನನ ಪರೀಕ್ಷೆ: ಶಂಟ್ ಮತ್ತು ಸಮ್ಮಿಶ್ರ (ಕಾಂಪೌಂಡ್) ಯಂತ್ರಗಳನ್ನು ಪರೀಕ್ಷಿಸಲು ಈ ವಿಧಾನ ಸಹಕಾರಿ. ಯಂತ್ರದ ಮೇಲೆ ಯಾವ ಹೊರೆಯೂ ಇಲ್ಲದಾಗ ಅದನ್ನು ಓಡಿಸಿ ಈ ಪರೀಕ್ಷೆ ನಡೆಸುತ್ತಾರೆ. ಇದನ್ನು ನಡೆಸಲು ಒಂದು ನಿಬಂಧನೆ ಎಂದರೆ ಪರೀಕ್ಷೆಗೊಳಗಾದ ಯಂತ್ರಗಳಲ್ಲಿ ಅಭಿವಾಹಗಳು (ಫ್ಲಕ್ಸಸ್) ಸ್ಥಿರವಾಗಿರಬೇಕು. ಈ ಪರೀಕ್ಷೆಯಿಂದ ಯಂತ್ರದಲ್ಲಿ ಉಂಟಾಗುವ ನಷ್ಟಗಳನ್ನು ಗೊತ್ತುಮಾಡಿ, ಈ ತಿಳಿವಳಿಕೆಯಿಂದ ಯಂತ್ರದ ದಕ್ಷತೆಯನ್ನು ನಿರ್ಧರಿಸಬಹುದು. ಈ ವಿಧಾನದ ಒಂದು ಅನುಕೂಲವೆಂದರೆ ನಾವು ಯಂತ್ರಕ್ಕಾಗಿ ವ್ಯಯಿಸುವ ಸಾಮಥರ್ಯ್‌ ಅಲ್ಪ. ಇದರಿಂದಾಗಿ ದೊಡ್ಡ ಯಂತ್ರಗಳನ್ನು ಪರೀಕ್ಷೆ ಮಾಡಬಹುದು. ಗೊತ್ತು ಮಾಡುವ ನಷ್ಟಗಳು ಸ್ಥಿರವಾದ್ದರಿಂದ ಯಂತ್ರದ ಮೇಲೆ ಬೇರೆ ಬೇರೆ ಹೊರೆಗಳಿದ್ದಾಗ ಅದರ ದಕ್ಷತೆಯನ್ನು ನಿರ್ಧರಿಸಬಹುದು.

3. ವೇಗಾಪಕರ್ಷಕ ಪರೀಕ್ಷೆ (ರಿಟಾರ್ಡೇಷನ್ ಟೆಸ್ಟ್‌): ಶಂಟ್ ಮೋಟಾರುಗಳ ಮತ್ತು ಏಕಮುಖ ವಿದ್ಯುಜ್ಜನಕಗಳ ಪರೀಕ್ಷೆಯಲ್ಲಿ ಈ ವಿಧಾನದ ಬಳಕೆಯಿದೆ. ಇಲ್ಲಿ ಘರ್ಷಣದಿಂದಾದ ನಷ್ಟ ಹಾಗೂ ಕಾಂತತ್ವದಿಂದಾದ ನಷ್ಟಗಳನ್ನು ಗೊತ್ತುಮಾಡುತ್ತಾರೆ. ಈ ಪರೀಕ್ಷೆ ನಡೆಸಲು ಯಂತ್ರವನ್ನು ಅದರ ಸಾಧಾರಣ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಓಡಿಸಿ ಅದರ ಆರ್ಮೆಚರಿನ ಕಡೆಯಲ್ಲಿ ವಿದ್ಯುತ್ಪ್ರವಾಹವನ್ನು ನಿಲ್ಲಿಸುತ್ತಾರೆ. ಆಗ ಅದರ ವೇಗ ಕಡಿಮೆಯಾಗುತ್ತದೆ. ಅದರ ಚಲನಶಕ್ತಿಯನ್ನು (ಕೈನೆಟಿಕ್ ಎನರ್ಜಿ) ನಷ್ಟಗಳನ್ನು ಕಂಡುಹಿಡಿಯಲು ಬಳಸುತ್ತಾರೆ. ಅನಂತರ ತಾಮ್ರದಿಂದಾದ ನಷ್ಟಗಳನ್ನು (ಗೊತ್ತಾದ ಹೊರೆಯಲ್ಲಿ) ಗಣನೆಗೆ ತೆಗೆದುಕೊಂಡು ದಕ್ಷತೆಯನ್ನು ಗೊತ್ತುಮಾಡುತ್ತಾರೆ.

4. ಹಾಪ್ಕಿನ್ಸನ್ನನ ಪರೀಕ್ಷೆ: ಈ ಪರೀಕ್ಷಾವಿಧಾನವನ್ನು ಹೆಚ್ಚು ಸಾಮಥರ್ಯ್‌ವುಳ್ಳ ಎರಡು ಸಮಾನ ಶಂಟ್ ಮೋಟಾರುಗಳನ್ನು ಪರೀಕ್ಷಿಸಲು ಉಪಯೋಗಿಸುತ್ತಾರೆ. ಎರಡು ಮೋಟಾರುಗಳಲ್ಲಿ ಒಂದನ್ನು ವಿದ್ಯುತ್ ಮೋಟಾರ್ ಆಗಿ ಓಡುವಂತೆಯೂ ಇನ್ನೊಂದನ್ನು ವಿದ್ಯುಜ್ಜನಕವಾಗಿ ಓಡುವಂತೆಯೂ ಸಮಾಂತರ ಸಂಬಂಧದಲ್ಲಿ ಜೋಡಿಸುತ್ತಾರೆ (ಕನೆಕ್ಟೆಡ್ ಇನ್ ಪ್ಯಾರಲಲ್). ವಿದ್ಯುತ್ ಮೋಟಾರು ವಿದ್ಯುಜ್ಜನಕ ಓಡಲು ಸಾಮಥರ್ಯ್‌ ಒದಗಿಸಿ ಕೊಡುತ್ತದೆ. ವಿದ್ಯುಜ್ಜನಕದಲ್ಲಿ ಉತ್ಪತ್ತಿಯಾದ ವಿದ್ಯುಚ್ಛಕ್ತಿಯನ್ನು ವಿದ್ಯುತ್ ಮೋಟಾರಿನಲ್ಲಿ ಬಳಸಲಾಗುವುದು. ಪ್ರಧಾನ ತಂತಿಗಳಿಂದ (ಮೆಯಿನ್ ಲೈನ್ಸ್‌) ಒದಗಿದ ಪ್ರವಾಹ ಸಾಮಥರ್ಯ್‌ ನಷ್ಟಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು. ಈ ನಷ್ಟಗಳು ಎರಡು ಯಂತ್ರಗಳಿಗೂ ಸಮಾನವಾಗಿ ಹಂಚಲ್ಪಟ್ಟು ಅವೆರಡರ ದಕ್ಷತೆಗಳನ್ನು ನಿರ್ಧರಿಸಲು ಸಹಾಯವಾಗುತ್ತದೆ. ದೊಡ್ಡ ಯಂತ್ರಗಳ ಪರೀಕ್ಷೆಗೆ ಇದು ಸುಲಭದ ವಿಧಾನ. ಇದು ಪುರ್ಣ ಹೊರೆಯ ಸ್ಥಿತಿಯಲ್ಲಿ ದಕ್ಷತೆ ಕೊಡುವುದಲ್ಲದೆ ಉಷ್ಣತೆಯಲ್ಲುಂಟಾದ ಏರಿಕೆಯನ್ನು ನಿರ್ಧರಿಸುತ್ತದೆ. ಈ ಪರೀಕ್ಷೆಯನ್ನು ಹಾಪ್ಕಿನ್ಸನ್ ಎಂಬಾತ ಮೊದಲು ಬಳಕೆಗೆ ತಂದುದರಿಂದ ಆತನ ಹೆಸರೇ ಇದಕ್ಕೆ ಬಂದಿದೆ. ಇದನ್ನು ಬ್ಯಾಕ್-ಟು-ಬ್ಯಾಕ್ ಪರೀಕ್ಷೆ ಎಂದೂ ಕರೆಯುತ್ತಾರೆ.

5. ಕ್ಷೇತ್ರ ಪರೀಕ್ಷೆ: ಸಾಗಾಣಿಕೆಯಲ್ಲಿ ಬಳಸುವ ಟ್ರಾಮ್ ಕಾರುಗಳಲ್ಲಿ ಸಾಮಾನ್ಯವಾಗಿ ಎರಡು ಏಕಮುಖ ಶ್ರೇಣಿ ವಿದ್ಯುತ್ ಮೋಟಾರುಗಳನ್ನು ಬಳಸುತ್ತಾರೆ. ಇಂಥ ಶ್ರೇಣಿ ಮೋಟಾರುಗಳ ಪರೀಕ್ಷೆಗೆ ಕ್ಷೇತ್ರ ಪರೀಕ್ಷೆ ಒಂದು ಸುಲಭ ವಿಧಾನ. ಎರಡು ಸಮಾನ ಮೋಟಾರುಗಳ ಕ್ಷೇತ್ರಗಳನ್ನು ಒಂದಕ್ಕೊಂದು ಅಂಟಿಕೊಂಡಂತೆ ಜೋಡಿಸಿ ಪರೀಕ್ಷೆಗೊಳಪಡಿಸುತ್ತಾರೆ. ಮೊದಲನೆಯ ಯಂತ್ರ ಮೋಟಾರಾಗಿ ಓಡಿ ಎರಡನೆಯದು ವಿದ್ಯುಜ್ಜನಕವಾಗಿ ಓಡುತ್ತದೆ. ಎರಡನೆಯ ಯಂತ್ರದಿಂದ ಒದಗಿದ ಸಾಮಥರ್ಯ್‌ ಅದಕ್ಕೆ ಸಂಬಂಧಿಸಿದ ಪ್ರತಿರೋಧದಲ್ಲಿ (ಖ) ವ್ಯಯವಾಗುತ್ತದೆ.

ಈ ರೀತಿಯ ಜೋಡಣೆಯಿಂದ ಯಂತ್ರದಲ್ಲಿನ ನಷ್ಟಗಳು ಸಮಾನವಾಗಿ ಎರಡು ಯಂತ್ರಕ್ಕೂ ಹಂಚಲ್ಪಡುತ್ತವೆ. ಇದರಿಂದ ಯಂತ್ರಗಳ ದಕ್ಷತೆ ನಿರ್ಧರಿಸಲು ಸಾಧ್ಯ.
ಮೇಲೆ ತಿಳಿಸಿದ ಪರೀಕ್ಷೆಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ. ಕೆಲವು ವಿಶೇಷ ಯಂತ್ರಗಳಿಗೆ ಅಲ್ಲಿನ ಸ್ಥಿತಿಗನುಸಾರವಾಗಿ ಇತರ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಏಕಮುಖ ವಿದ್ಯುದ್ಯಂತ್ರಗಳಲ್ಲಿ ವಿದ್ಯುತ್ಪ್ರವಾಹ ಕ್ರಮವಾದ್ದರಿಂದ ಅವುಗಳ ಪರೀಕ್ಷೆಗಳು ಅಷ್ಟು ಕಠಿಣವಲ್ಲ. ನಿರ್ಧರಿಸಬೇಕಾದ ಅಂಶಗಳು ಸಂಖ್ಯೆಯಲ್ಲಿ ಕಡಿಮೆ ಇವೆ.                                    		                                                          (ಬಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ